ಪ್ರಕಾಶನ : ಹೇಮಂತ ಸಾಹಿತ್ಯ
ಕಿರಾತಾರ್ಜುನೀಯವು ಸಂಸ್ಕೃತದ ಪಂಚಮಹಾಕಾವ್ಯಗಳಲ್ಲಿ ಒಂದು. ಇದರ ಕೆಲವು ಭಾಗಗಳು ನನಗೆ ವ್ಯಾಸಂಗದ ಸಮಯದಲ್ಲಿ ಪಠ್ಯವಾಗಿದ್ದು ಆ ಸಂದರ್ಭದಲ್ಲಿ ಈ ಇಡೀ ಮಹಾಕಾವ್ಯದ ಕನ್ನಡಾನುವಾದ ಮಾಡಬೇಕೆಂಬ ಉತ್ಕಟೇಚ್ಛೆಯುಂಟಾಯಿತು. ಅನಂತರ ಸಂಸ್ಕೃತದ ಉದ್ದಾಮ ಪಂಡಿತರೂ ಆಶುಕವಿಗಳೂ ಆದ ನನ್ನ ತಂದೆ ಪ್ರತಿವಾದಿ ಭಯಂಕರಂ ಸಂಪತ್ಕುಮಾರಾಚಾರ್ಯರ ಬಳಿ ನಾನು ಈ ಮಹಾಕಾವ್ಯವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಈ ಕಾವ್ಯದ ಬಗ್ಗೆ ನನಗೆ ವಿಶೇಷವಾದ ಒಲವು ಮೂಡಲು ಮತ್ತೊಂದು ಕಾರಣವೆಂದರೆ ಕವಿ ಭಾರವಿಯು ಕನ್ನಡನಾಡಿನಲ್ಲಿ ಬಂದು ನೆಲೆಸಿ ಕೀರ್ತಿಯನ್ನು ಗಳಿಸಿದ ಮಹಾಕವಿ. ಇವನು ಕನ್ನಡಿಗರಿಗೆ ಹತ್ತಿರವಾಗಿ ಅವರ ಪ್ರೀತಿವಿಶ್ವಾಸವನ್ನು ಗಳಿಸಿದವನು. ಒಟ್ಟಿನಲ್ಲಿ ಭಾರವಿಯ ಕಿರಾತಾರ್ಜುನೀಯದ ಅರ್ಥವನ್ನು ಓದುಗರ ಮನದಲ್ಲಿ ಅನಾವರಣಗೊಳಿಸಿ ಅದರ ಸ್ವಾರಸ್ಯವನ್ನು ಆಸ್ವಾದಿಸಲು ಸಹಾಯಕವಾಗುತ್ತದೆಂದು ಭಾವಿಸುತ್ತೇನೆ.
Be the first to review “ಕಿರಾತಾರ್ಜುನೀಯಂ / Kirataarjuneeyam”